ಏಪ್ರಿಲ್ ವೇಳೆಗೆ ನೀರಿನ ತೀವ್ರ ಅಭಾವ ತಲೆದೋರಲಿದೆ. ಹಿಡಕಲ್ ಜಲಾಶಯದಲ್ಲಿ ನೀರಿನ ಮಟ್ಟ ತೀವ್ರ ಕುಸಿದಿದ್ದು, ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಎಚ್ಚರಿಕೆ ಇದೆ.
ಹೈಲೈಟ್ಸ್:
- ಹುಕ್ಕೇರಿ ತಾಲೂಕಿಗೆ ಏಪ್ರಿಲ್ ಅಂತ್ಯಕ್ಕೆ ಸಮಸ್ಯೆ ಸಾಧ್ಯತೆ
- ಬೆಳಗಾವಿ ನಗರ, ಗೋಕಾಕ, ಮೂಡಲಗಿ, ಬಾಗಲಕೋಟೆ, ಮುಧೋಳ ಸೇರಿದಂತೆ ಹಲವು ಪಟ್ಟಣ ಮತ್ತು ಗ್ರಾಮಗಳಿಗೆ ಕುಡಿಯುವ ನೀರಿಗೆ ಆತಂಕ
- ಬೆಳಗಾವಿ ನಗರ, ಗೋಕಾಕ, ಮೂಡಲಗಿ, ಬಾಗಲಕೋಟೆ, ಮುಧೋಳ ಸೇರಿದಂತೆ ಹಲವು ಪಟ್ಟಣ ಮತ್ತು ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ
ತಾಲೂಕಿನ ಹಿಡಕಲ್ ಜಲಾಶಯ (ರಾಜಾ ಲಖಮಗೌಡ ಅಣೆಕಟ್ಟು) ನೀರಿನ ಮಟ್ಟ ಈಗಾಗಲೇ ಕುಸಿತ ಕಂಡಿದ್ದು, ಮುಂದೆ ಕುಡಿಯುವ ನೀರು ಮತ್ತು ಕೃಷಿಗೆ ಆತಂಕ ಎದುರಾಗುವ ಸಂಭವವಿದೆ. 51.16 ಟಿಎಂಸಿ ನೀರಿನ ಸಾಮರ್ಥ್ಯದ ಜಲಾಶಯದಲ್ಲಿ ನೀರು ಹಂತ ಹಂತವಾಗಿ ಬರಿದಾಗುತ್ತಿದ್ದು, ಕೆಳಹಂತದ ಗ್ರಾಮಗಳಲ್ಲಿ ನೀರಿನ ಅಭಾವ ತಲೆದೋರುವ ಸಂಭವ ಇದೆ. ತಾಲೂಕಿನ ಜತೆಗೆ ಬೆಳಗಾವಿ ನಗರ, ಗೋಕಾಕ, ಮೂಡಲಗಿ, ಬಾಗಲಕೋಟೆ, ಮುಧೋಳ ಸೇರಿದಂತೆ ಹಲವು ಪಟ್ಟಣ ಮತ್ತು ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಹಿಡಕಲ್ ಜಲಾಶಯ ಕಳೆದ ವರ್ಷಕ್ಕಿಂತ ಈ ವರ್ಷ ನೀರಿನ ಮಟ್ಟದಲ್ಲಿ ಭಾರಿ ಕುಸಿತ ಕಂಡಿದೆ.
